ಜಿಯೋ ಗಿಗಾ ಫೈಬರ್ ಬ್ರಾಡ್‌ಬ್ಯಾಂಡ್ ಸೇವೆಗಾಗಿ ನೋಂದಾಯಿಸುವುದು ಹೇಗೆ?

ರಿಲಯನ್ಸ್ ಇತ್ತೀಚೆಗಷ್ಟೆ ಭಾರತದಲ್ಲಿ ತನ್ನ ಜಿಯೋ ಗಿಗಾ ಫೈಬರ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಪ್ರಕಟಿಸಿದ್ದು, ಇದು ಸೆಪ್ಟೆಂಬರ್ 5 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈ ಸೇವೆಯ ಯೋಜನೆಗಳು 700 ರೂ.ಗಳಿಂದ ಪ್ರಾರಂಭವಾಗಲಿದ್ದು, ತಿಂಗಳಿಗೆ 10,000 ರೂವರೆಗಿನ ಯೋಜನೆಗಳೂ ಸಹ ಇವೆ. ರಿಲಯನ್ಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಖೇಶ್ ಅಂಬಾನಿ ಅವರು, ಈ ಸೇವೆಯು 100 Mbps ಪ್ರಾರಂಭಿಕ ವೇಗವನ್ನು ನೀಡುವುದರ ಜೊತೆಗೆ 1 Gbps ವರೆಗೂ ತಲುಪುವ ಯೋಜನೆಗಳು ಈ ಸೇವೆಯಲ್ಲಿದೆ ಎಂದು ಭರವಸೆ ನೀಡಿದ್ದಾರೆ.

ಈ ಜಿಯೋ ಗಿಗಾ ಫೈಬರ್ ಸೇವೆಯೊಂದಿಗೆ, ನೀವು ಆಯ್ಕೆ ಮಾಡಿದ ಯೋಜನೆಯನ್ನು ಅವಲಂಬಿಸಿ ಉಚಿತ ಎಚ್ಡಿ ಅಥವಾ 4K ಎಲ್ಇಡಿ ಟಿವಿ ಪಡೆಯಬಹುದು. ಖರೀದಿದಾರರಿಗೆ ಅವರು ಆಯ್ಕೆ ಮಾಡಿದ ಸುಂಕದ ಯೋಜನೆಯ ಪ್ರಕಾರ ಅನಿಯಮಿತ ಕರೆ ಮತ್ತು 4K ಸೆಟ್-ಟಾಪ್ ಬಾಕ್ಸ್‌ನೊಂದಿಗೆ ಉಚಿತ ಲ್ಯಾಂಡ್‌ಲೈನ್ ಸಂಪರ್ಕವನ್ನೂ ಸಹ ನೀಡಲಾಗುವುದು.

ಆದ್ದರಿಂದ ನೀವು ಈ ಜಿಯೋ ಗಿಗಾ ಫೈಬರ್ ಸೇವೆಯನ್ನು ನಿಮ್ಮ ಮನೆಯಲ್ಲಿ ಹೇಗೆ ಪಡೆಯುವುದು ಎಂದು ಯೋಚಿಸುತಿದ್ದರೆ, ಅದರ ನೋಂದಾವಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ!

ಜಿಯೋ ಗಿಗಾ ಫೈಬರ್ ಬ್ರಾಡ್‌ಬ್ಯಾಂಡ್ ಸೇವೆಗಾಗಿ ನೋಂದಾಯಿಸುವುದು ಹೇಗೆ? 1

ಜಿಯೋ ಗಿಗಾ ಫೈಬರ್ ಬ್ರಾಡ್‌ಬ್ಯಾಂಡ್ ಸೇವೆಗೆ ನೋಂದಾಯಿಸುವುದು ಹೇಗೆ?

Step 01: ಜಿಯೋ ಗಿಗಾ ಫೈಬರ್ ನೋಂದಣಿ ವೆಬ್‌ಸೈಟ್‌ಗೆ ಹೋಗಿ (ಇಲ್ಲಿ ಕ್ಲಿಕ್ ಮಾಡಿ)

Step 02: ನೀವು ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಹೊಂದಲು ಬಯಸುವ ವಿಳಾಸವನ್ನು ನಮೂದಿಸಿ

Step 03: ಹೆಸರು, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯಂತಹ ಅಗತ್ಯ ವಿವರಗಳನ್ನು ಭರ್ತಿ ಮಾಡಿ

Step 04: ಪರಿಶೀಲನೆಗಾಗಿ ನೀವು ಕೊಟ್ಟ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ. ಆ ಒಟಿಪಿಯನ್ನು ವೆಬ್‌ಸೈಟ್‌ನಲ್ಲಿ ನಮೂದಿಸಿ

Step 05: ಕೆಲವು ದಿನಗಳಲ್ಲಿ ರಿಲಯನ್ಸ್ ಜಿಯೋ ಕಾರ್ಯನಿರ್ವಾಹಕರೊಬ್ಬರು ನೀವು ನೀಡಿದ ಮಾಹಿತಿಯನ್ನು ಪರಿಶೀಲಿಸಲು ನಿಮ್ಮನ್ನು ಸಂಪರ್ಕ ಮಾಡುತ್ತಾರೆ

ಇಷ್ಟು ಮಾಡಿದರೆ ಸಾಕು. ನೀವು ಯಶಸ್ವಿಯಾಗಿ ಜಿಯೋ ಗಿಗಾ ಫೈಬರ್ ಸೇವೆಗೆ ಯಶಸ್ವಿಯಾಗಿ ನೋಂದನಣಿಗೊಂಡಿದ್ದೀರ. ನಂತರ ನಿಮ್ಮ ಐಡಿ ಪ್ರೂಫ್ ಮತ್ತು ವಿಳಾಸ ಪುರಾವೆ ಸೇರಿದಂತೆ ನಿಮ್ಮ ಮೂಲ ದಾಖಲೆಗಳನ್ನು ಪರಿಶೀಲಿಸಲು ರಿಲಯನ್ಸ್ ಜಿಯೋ ಕಾರ್ಯನಿರ್ವಾಹಕರೊಬ್ಬರು ನಿಮ್ಮನ್ನು ಭೇಟಿ ಮಾಡುತ್ತಾರೆ.

ಈ ಆರ್ಟಿಕಲ್ ಇಷ್ಟ ಆದ್ರೆ ಶೇರ್ ಮಾಡಿ. ಎಲ್ಲಾ ತರಹದ ಮನರಂಜನೆ, ಗಾಸಿಪ್, ಮಾಹಿತಿ, ಮೀಮ್ಸ್ ಗಳಿಗಾಗಿ The Logical Kannadigaವನ್ನು ಎಲ್ಲ ಸೋಶಿಯಲ್ ಮೀಡಿಯಗಳಲ್ಲಿ ಫಾಲೋ ಮಾಡಲು ಮರರೆಯಬೇಡಿ!

Comments

comments

Leave a Reply

Your email address will not be published. Required fields are marked *