ಕನ್ನಡ ಯುಟ್ಯೂಬ್ ಚಾನೆಲ್ ಲಹರಿ ಮ್ಯೂಸಿಕ್ ಹ್ಯಾಕ್ | Lahari Music Hacked!

ದಕ್ಷಿಣ ಭಾರತದ ಅತಿ ದೊಡ್ಡ ಆಡಿಯೋ ಲೇಬಲ್ ಎಂದೇ ಪ್ರಖ್ಯಾತಿ ಹೊಂದಿರುವ “ಲಹರಿ ಮ್ಯೂಸಿಕ್” ಕನ್ನಡ ಯುಟ್ಯೂಬ್ ಚಾನೆಲ್ ಈಗ ಹ್ಯಾಕರ್ಸ್ ಕಣ್ಣಿಗೆ ಗುರಿಯಾಗಿದೆ. ಹೌದು! ಇತ್ತೀಚೆಗಷ್ಟೇ T-Series ಜೊತೆಯಾಗಿದ್ದ ಲಹರಿ ಮ್ಯೂಸಿಕ್ ಇಂದು ಬೆಳಗ್ಗೆ ಹ್ಯಾಕ್ ಆಗಿದೆ.

 

ಕನ್ನಡ ಯುಟ್ಯೂಬ್ ಚಾನೆಲ್ ಲಹರಿ ಮ್ಯೂಸಿಕ್ ಹ್ಯಾಕ್ | Lahari Music Hacked! 1

 

T-Series vs PewDiePie ನಡುವಿನ ವಿಷಯ ನಿಮಗೆ ಗೊತ್ತೇ ಇದೆ. ಯುಟ್ಯೂಬಿನ ಅತಿ ಹೆಚ್ಚು ಚಂದಾದಾರನ್ನು ಹೊದಿರುವ ಚಾನೆಲ್ಗಳಲ್ಲಿ, ನೋ.೦೧ ಸ್ಥಾನಕ್ಕೆ ಈ ಎರಡು ಚಾನೆಲ್ಗಳು ಪೈಪೋಟಿ ನಡೆಸುತಿದ್ದವು. ಇದೆ ಕಾರಣಕ್ಕೆ ಯುಸರ್ಸ್ ನಡುವೆ ಕೂಡ ಭಾರಿ ಪೈಪೋಟಿ ಇತ್ತು. ಹಲವಾರು ಜನ ವಿವಿಧ ರೀತಿಯಲ್ಲಿ ಪ್ರಚಾರಕ್ಕೆ ಇಳಿದರು. ಇದೆ ಬಿಸಿ ಈಗ ನಮ್ಮ ಕನ್ನಡದ ಯುಟ್ಯೂಬ್ ಚಾನೆಲ್ ಲಹರಿ ಮ್ಯೂಸಿಕ್ಗೆ ಕೂಡ ತಟ್ಟಿದೆ!

 

ಕನ್ನಡ ಯುಟ್ಯೂಬ್ ಚಾನೆಲ್ ಲಹರಿ ಮ್ಯೂಸಿಕ್ ಹ್ಯಾಕ್ | Lahari Music Hacked! 2

 

ಇಂದು ಬೆಳಗ್ಗೆ ರಷ್ಯಾದ ಓರ್ವ ಹ್ಯಾಕರ್ ನಮ್ಮ ಕನ್ನಡ ಯುಟ್ಯೂಬ್ ಚಾನೆಲ್ಅನ್ನು ಹ್ಯಾಕ್ ಮಡಿ “SUBSCRIBE TO PEWDIEPIE” ಎಂದು ಅವನ ಮಾತೃ ಭಾಷೆಯಲ್ಲಿ ಬರೆದಿದ್ದಾನೆ. ಅದಲ್ಲದೆ ಕಮ್ಯೂನಿಟಿ ಟ್ಯಾಬ್ನಲ್ಲೂ ಸಹ ಇದೆ ರೀತಿ ಬರೆದು ಲಿಂಕ್ ಕೂಡ ಹಾಕಿದ್ದಾನೆ!

 

ಕನ್ನಡ ಯುಟ್ಯೂಬ್ ಚಾನೆಲ್ ಲಹರಿ ಮ್ಯೂಸಿಕ್ ಹ್ಯಾಕ್ | Lahari Music Hacked! 3

 

ಇದರ ಜೊತೆಗೆ ಯಾವುದೊ ಕಾರ್ಟೂನ್ ವೀಡಿಯೊ ಅಪ್ಲೋಡ್ ಮಡಿ, ತನ್ನ ಹೆಸರನ್ನು ಸೇರಿಸಿದ್ದಾನೆ!

 

ಕನ್ನಡ ಯುಟ್ಯೂಬ್ ಚಾನೆಲ್ ಲಹರಿ ಮ್ಯೂಸಿಕ್ ಹ್ಯಾಕ್ | Lahari Music Hacked! 4

 

ಅವನ ಹೆಸರು tamerlanfx ಎಂದು ತಿಳಿದು ಬಂದಿದೆ. ಲಹರಿ ಮ್ಯೂಸಿಕ್ ಚಾನೆಲ್ ಇಂದ ಕೆಲವು ವೀಡಿಯೊಗಳು ಕೂಡ ಅಳಿಸಿಹೊಗಿರಬಹುದು ಎಂಬ ಶಂಕೆ ಇದೆ. ಈಗ ಸದ್ಯಕ್ಕೆ ಯುಟ್ಯೂಬ್ ಆ ಚಾನೆಲ್ ಅನ್ನು ರಿಕವರ್ ಮಾಡಿ ಮೊದಲಿನ ಸ್ಥಿತಿಗೆ ತಂದಿದೆ.

 

ಕನ್ನಡ ಯುಟ್ಯೂಬ್ ಚಾನೆಲ್ ಲಹರಿ ಮ್ಯೂಸಿಕ್ ಹ್ಯಾಕ್ | Lahari Music Hacked! 5

ಕನ್ನಡ ಯುಟ್ಯೂಬ್ ಚಾನೆಲ್ ಲಹರಿ ಮ್ಯೂಸಿಕ್ ಹ್ಯಾಕ್ | Lahari Music Hacked! 6

 

ಒಂದು ಚಾನೆಲ್ ವಿಷಯಕ್ಕೆ ಅಭಿಮಾನಿಗಳು ಹ್ಯಾಕ್ ಮಾಡುವಷ್ಟು ಮುಂದುವರೆದಿರುವುದು ನಿಜಕ್ಕೂ ಆಶ್ಚರ್ಯ! ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಕಾಮೆಂಟ್ ನಲ್ಲಿ ತಿಳಿಸಿ..

 

Comments

comments

Leave a Reply

Your email address will not be published. Required fields are marked *